ಅಭಿಪ್ರಾಯ / ಸಲಹೆಗಳು

ಸುರಕ್ಷತಾ ಕ್ರಮಗಳು

ಗೃಹ ಬಳಕೆ ಗ್ರಾಹಕರು

 

ಮಾಡಿ 

1. ಪ್ಲಗ್ ಬಿಂದುವಿನಿಂದ ಸಂಪರ್ಕ ಪಡೆಯಲು ಗುಣಮಟ್ಟದ ಪಿನ್ನನ್ನು ಬಳಸಿ.

2. ಅನುಮೋದಿತ ಗುಣಮಟ್ಟದ ಮತ್ತು ಐ.ಎಸ್.ಐ. ಗುರುತಿನ ವಯರ್‍ಗಳು/ಸ್ವಿಚ್ ಗಳು/ಕೇಬಲ್‍ಗಳನ್ನೇ ಯಾವಾಗಲೂ ಬಳಸಿ.

3. ಸ್ವಿಚ್ ಆರಿಸಿದ ಬಳಿಕವಷ್ಟೇ ಉಪಯೋಗಿಸಲ್ಪಟ್ಟ ಬಲ್ಬ್‍ಗಳನ್ನು ಬದಲಾಯಿಸಿ.

4. ದೀಪದ ಎಲ್ಲಾ ಹಿಡಿಕೆಗಳು ದೀಪದೊಂದಿಗೇ ಇರಲಿ.

5. ಇಸ್ತ್ರಿ ಪೆಟ್ಟಿಗೆಗಳು ಮತ್ತು ಗೀಸರುಗಳ ಸಂಪರ್ಕಕ್ಕೆ ಸರಿಯಾದ ರೀತಿಯಲ್ಲಿ ಭೂಸಂಪರ್ಕ ನೀಡಿರುವ ತ್ರೀಪಿನ್ ಪ್ಲಗ್‍ಗಳನ್ನು ಉಪಯೋಗಿಸಿ.

6. ಯಾವಾಗಲೂ ಐ.ಎಸ್.ಐ. ಗುರುತಿನ ವಿದ್ಯುತ್ ಉಪಕರಣಗಳು/ಸಲಕರಣೆಗಳನ್ನು ಖರೀದಿಸಿ/ಬಳಸಿ ಮತ್ತು ಕೈಪಿಡಿಯಲ್ಲಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.

7. ಹೊರೆಯನ್ನು ಮಿತಿಯಲ್ಲಿಡಲು ಯೋಗ್ಯ ಎಂಸಿಬಿಯನ್ನು ಬಳಸಿ.

8. ಪ್ರಾಣಾಂತಿಕ ಶಾಕ್ ತಪ್ಪಿಸಲು ಇಎಲ್‍ಸಿಬಿ/ಆರ್‍ಸಿಸಿಬಿಯೊಂದನ್ನು ಅಳವಡಿಸಿ.

9. ಯೋಗ್ಯ ಗುಣಮಟ್ಟದ ಫ್ಯೂಸನ್ನೇ ಯಾವಾಗಲೂ ಒದಗಿಸಿ.

10. ಪ್ಲಗ್/ಸಾಕೆಟ್‍ಗಳು ಮಕ್ಕಳ ಕೈಗೆಟಕದಂತೆ ಯಾವತ್ತೂ ಖಚಿತಪಡಿಸಿಕೊಳ್ಳಿ.

11. ಮಣ್ಣಿನ ಪ್ರತಿರೋಧ ಕಡಿಮೆ ಮಾಡುವ ನಿಟ್ಟಿನಲ್ಲಿ ಭೂಸಂಪರ್ಕ ವಿದ್ಯುದ್ವಾರಕ್ಕೆ ಅಗಾಗ್ಗೆ ನೀರು ಒದಗಿಸಿ.

12. ಭೂಸಂಪರ್ಕ ನಿರಂತರವಾಗಿರಲು ಭೂ ಸೀಸ ಮತ್ತು ಮಣ್ಣಿನ ಪ್ರತಿರೋಧವನ್ನು ನಿಯತಕಾಲದಲ್ಲಿ ಪರೀಕ್ಷಿಸಿ.

13. ವಿದ್ಯುತ್ ಉಪಕರಣಗಳ ಮಾದರಿ ಮತ್ತು ಅಳವಡಿಸುವ ಸ್ಥಳದ ಬಗ್ಗೆ ವಿದ್ಯುತ್ ಇಂಜಿನಿಯರ್‍ರಿಂದ/ತಜ್ಞರಿಂದ ಸಲಹೆ ಪಡೆಯಿರಿ.

14. ಸರ್ಕಾರದಿಂದ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರಿಂದ ವಿದ್ಯುತ್ ಕೆಲಸಗಳನ್ನು ಮಾಡಿಸಿ.

15. ದುರಸ್ತಿ ಮತ್ತು ಪರೀಕ್ಷೆಗಾಗಿ ಯಾವಾಗಲೂ ಪ್ರಮಾಣೀಕೃತ ವಿದ್ಯುತ್ ಕೆಲಸಗಾರನ್ನು ಪಡೆಯಿರಿ.

16. ವಿದ್ಯುತ್ ಉಪಕರಣಗಳ ಕೆಲಸ ನಿರ್ವಹಿಸುವಾಗ ರಬ್ಬರ್ ಕೈಚೀಲಗಳನ್ನು ಬಳಸಿ.

17. ವಿದ್ಯುತ್ ಉಪಕರಣಗಳ ಕೆಲಸ ನಿರ್ವಹಿಸುವಾಗ ರಬ್ಬರ್ ಚಾಪೆಗಳನ್ನು ಬಳಸಿ.

18. ವಿದ್ಯುತ್ ವಯರ್‍ಗಳು ಮತ್ತು ಸಾಧನ ಸಾಮಾನುಗಳನ್ನು ನಿರ್ವಹಿಸುವಾಗ ಪೂರ್ತಿ ವಿದ್ಯುತ್ ನಿರೋಧಕ ಹೊಂದಿರುವ ಉಪಕರಣಗಳನ್ನು ಉಪಯೋಗಿಸಿ.

19. ಬರಿಯ ಅಂಶದ ವಿದ್ಯುತ್ ಸಂಪರ್ಕಗಳನ್ನು ಒಳ್ಳೆ ಗುಣಮಟ್ಟದ ವಿದ್ಯುತ್ ನಿರೋಧಕಗಳಿಂದ ರಕ್ಷಾಕವಚ ಹಾಕಿ.

20. ಸಡಿಲ ಸಂಪರ್ಕಗಳಿಂದ ಮತ್ತು ತದನಂತರ ಬಿಸಿಯಾಗಿ ಕರಗುವುದನ್ನು ತಪ್ಪಿಸಲು ಪರಸ್ಪರ ಹೊಂದಿಕೆಯಾಗುವ ಪ್ಲಗ್ ಮತ್ತು ಸಾಕೆಟ್‍ಗಳ ಯಾವಾಗಲೂ ಖಚಿತಪಡಿಸಿಕೊಂಡಿರಿ.

21. ಮೇಲ್ಮೈಯನ್ನು ಶುಚಿಗೊಳಿಸಿ. ಪ್ರತೀ 2-3 ವರ್ಷಗಳಿಗೊಮ್ಮೆ ಸಾಕೆಟ್‍ನ್ನು ಬದಲಾಯಿಸಿ.

22. ವಿದ್ಯುತ್ ಅಪಘಾತವಾದರೆ ಕೂಡಲೇ ಚೆಸ್ಕಾಂ ಗೆ, ಪೋಲೀಸರಿಗೆ ಮತ್ತು ವಿದ್ಯುತ್ ಪರಿವೀಕ್ಷರಿಗೆ ತಿಳಿಸಿ.

23. ವಾಲಿದ ಕಂಬಗಳ ಬಗ್ಗೆ ಮತ್ತು ಭೂಮಟ್ಟದ ತೀರುವಳಿ ಸಾಕಷ್ಟಿಲ್ಲದ ಬಗ್ಗೆ ಚೆಸ್ಕಾಂಗೆ ತಕ್ಷಣ ತಿಳಿಸಿ.

24. ಸ್ಥಾವರದಲ್ಲಿ ವಿದ್ಯುತ್ ಸೋರಿಕೆÀ ಇದ್ದಲ್ಲಿ ಚೆಸ್ಕಾಂ ಕಛೇರಿಗೆ ತಿಳಿಸಿ.

25. ಯಾವಾಗಲೂ ಹೀಟರ್ ಮತ್ತು ಬಾಯ್ಲರ್‍ಗಳಿಗೆ ಕ್ರಮವಾಗಿ ಸಿಮ್ಮರ್ ಸ್ಟಾಟ್ ಮತ್ತು ಥರ್ಮೊಸ್ಟಾಟ್‍ಗಳನ್ನು ಉಪಯೋಗಿಸಿ.

26. ಯಾವುದಾದರೂ ದುರಸ್ತಿ ಕೆಲಸ ನಡೆಸಬೇಕಾದ ವಿದ್ಯುತ್ ಸರಬರಾಜಿನ ಸ್ವಿಚ್‍ನ್ನು ಆರಿಸಿ ಬಿಡಿ.

27. ಮೈನ್ ಸ್ವಿಚ್ಚನ್ನು ಆರಿಸಿದ ಬಳಿಕ ಮಾತ್ರವೇ ಫ್ಯಾನ್ ಇತ್ಯಾದಿ ಉಪಕರಣಗಳನ್ನು ಪ್ರತ್ಯೇಕಿಸಿ ಗ್ರಾಹಕರೇ ನಿಯತಕಾಲಿಕವಾಗಿ ಶುಚಿಮಾಡಬಹುದು ಮತ್ತು ಗ್ರೀಸ್ ಹಚ್ಚಬಹುದು.

28. ಸ್ಥಾವರಕ್ಕೆ ಮತ್ತು ಮಾಪಕಕ್ಕೆ ಪ್ರತ್ಯೇಕವಾದ ಭೂಸಂಪರ್ಕ ವಿದ್ಯುದ್ವಾರಗಳನ್ನು ಹಾಕುವುದನ್ನು ಖಚಿತಪಡಿಸಿಕೊಳ್ಳಿ

 

 

ಮಾಡದಿರಿ  

1. ಬರಿಯ ವಯರುಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಪಡೆಯುವುದನ್ನು ತಪ್ಪಿಸಿ.

2. ಬಟ್ಟೆ ಒಣಗಿಸುವ ಹಗ್ಗ ಕಟ್ಟಲು ದೀಪಗಳ ಕಂಸ ಯಾ ಆವರಣವನ್ನು ಉಪಯೋಗಿಸಬೇಡಿ.

3. ಸ್ವಿಚ್ ಆನ್ ಇರುವಾಗ ಫ್ಯೂಸ್ ಹೋದ ಬಲ್ಬುಗಳನ್ನು ಬದಲಾಯಿಸುವುದು ಅಪಾಯಕಾರಿ

4. ದೀಪವಿಲ್ಲದೆ ದೀಪದ ಹಿಡಿಕೆಗಳನ್ನಿಡಬೇಡಿ.

5. ಕಳಪೆ ಗುಣಮಟ್ಟದ ವಿದ್ಯುತ್ ಜೋಡಣೆಯನ್ನು ಖರೀದಿಸಬೇಡಿ. ಇಂತಹ ಜೋಡಣೆಗಳಿಂದ ಅಪಘಾತವಾಗುವ ಸಂಭವವಿದೆ.

6. ಮಿಕ್ಸಿಗಳು, ರಿಫ್ರಿಜರೇಟರ್‍ಗಳು, ಅರೆಯುವ ಯಂತ್ರಗಳು, ವಾಶಿಂಗ್ ಮೆಶಿನ್‍ಗಳು, ಇಸ್ತ್ರಿ ಪೆಟ್ಟಿಗೆಗಳು ಮತ್ತು ಗೀಸರ್‍ಗಳನ್ನು ಭೂಸಂಪರ್ಕವಿಲ್ಲದ ಪ್ಲಗ್‍ಪಿನ್‍ನಿಂದ ಸಂಪರ್ಕ ನೀಡಬೇಡಿ.

ಇದರಿಂದ ತೀವ್ರ ಅಪಘಾತಗಳಾಗಬಹುದು.

7. ನಿಮ್ಮ ಕೈಗಳು ಒದ್ದೆಯಾಗಿರುವಾಗ ಅಥವಾ ಗಾಯದಿಂದ ರಕ್ತ ಸೋರುತ್ತಿರುವಾಗ ವಿದ್ಯುತ್ ಸ್ವಿಚ್ ಅಥವಾ ಉಪಕರಣಗಳನ್ನು ಜೋಡಿಸಬೇಡಿ.

8. ಕೇಬಲ್‍ಗಳನ್ನು/ಉದ್ಯಾನವನದ ದೀಪಗಳು/ದ್ವಾರದೀಪಗಳ ಕೇಬಲ್‍ಗಳನ್ನು ಮುಕ್ತವಾಗಿ ತೆರೆದಿಡಬೇಡಿ. ಯಾವಾಗಲೂ ಹ್ಯೂಮ್ ಪೈಪಿನೊಳಗೆ ಹಾಕಿ ಅಳವಡಿಸಿ ಮತ್ತು ಕೇಬಲ್ ಮಾರ್ಗವನ್ನು ಗುರುತು ಮಾಡಿ.

9. ಟೂ ಇನ್ ವನ್ ಪ್ಲಗ್ ಮತ್ತು ಸಾಕೆಟ್‍ಗಳನ್ನು ಬಳಸಬೇಡಿ.

10. ಒಡೆದ ಸ್ವಿಚ್‍ಗಳು, ಪ್ಲಗ್‍ಗಳು ಮತ್ತು ಸಾಕೆಟ್‍ಗಳನ್ನು ಬಳಸಬೇಡಿ.

11. ನ್ಯೂಟ್ರಲ್ ಮತ್ತು ಅರ್ತ್ ಲೀಡನ್ನು ಒಟ್ಟುಗೂಡಿಸಬೇಡಿ. ಯಾವತ್ತೂ ಪ್ರತ್ಯೇಕ ಮತ್ತು ವಿಶಿಷ್ಟವಾದ ನ್ಯೂಟ್ರಲ್ ವಯರ್ ಮತ್ತು ಭೂಸಂಪರ್ಕ ಶರೀರವನ್ನು ಪಡೆಯಿರಿ.

12. ವಾಟರ್ ಹೀಟರ್, ಗೀಸರ್, ವಿದ್ಯುತ್ ಇಸ್ತ್ರಿ ಪೆಟ್ಟಿಗೆಗಳು ಇತ್ಯಾದಿಗಳನ್ನು ಸರಿಯಾದ ಭೂಸಂಪರ್ಕವಿಲ್ಲದೆ ಉಪಯೋಗಿಸಬೇಡಿ.

13. ಏನೂ ತಿಳಿಯದ ವ್ಯಕ್ತಿಗೆ ವಿದ್ಯುತ್ ವ್ಯವಸ್ಥೆ ಮತ್ತು ಉಪಕರಣಗಳನ್ನು ನಿರ್ವಹಿಸಲು ಬಿಡಬೇಡಿ.

14. ಒದ್ದೆ ಕೈಯಲ್ಲಿ ವಿದ್ಯುತ್ ಉಪಕರಣಗಳ/ಸ್ವಿಚ್‍ಗಳ ಕಾರ್ಯ ನಡೆಸಬೇಡಿ.

15. ನೀರು ಬಿಸಿ ಮಾಡಲು, ತೆರೆದ ಬಿಸಿ ಮಾಡುವ ಕಾಯಿಲನ್ನು ಬಳಸಬೇಡಿ.

16. ತೆರೆದ ವಯರ್‍ಗಳನ್ನಾಗಲೀ/ ಜೋಡಿಸಿದ ವಯರ್‍ಗಳನ್ನು ಉಪಕರಣಗಳಿಗೆ ಬಳಸಬೇಡಿ.

17. ಜಂಕ್ಷನ್/ಪ್ಲಗ್ ಪಾಯಿಂಟ್‍ನಿಂದ ಸಡಿಲವಾದ/ತೆರೆದ ವಯರಿಂಗ್ ವಿಸ್ತರಿಸಬೇಡಿ.

18. ಒಂದು ಪ್ಲಗ್‍ಗೆ ಅಧಿಕ ಹೊರೆ ಹೇರಬೇಡಿ.

19. ವಿದ್ಯುತ್ ವ್ಯವಸ್ಥೆಯನ್ನು ಹೆಚ್ಚುವರಿ ಯಾ ಅನಧಿಕೃತ ಹೊರೆ ನೀಡಿ ಅಧಿಕ ಹೊರೆಗೊಳಿಸಬೇಡಿ.

20. ವಿದ್ಯುತ್ ಸರಬರಾಜಿನ ಸಂಪರ್ಕದಲ್ಲಿರುವ ಯಾವುದೇ ವ್ಯಕ್ತಿಯನ್ನು ಬರೀ ಕೈಯಲ್ಲಿ ಮುಟ್ಟಬೇಡಿ.

21. ವಿದ್ಯುತ್ ಕಂಬಗಳನ್ನು/ಪ್ರಸರಣ ಗೋಪುರಗಳನ್ನು ಏರಬೇಡಿ.

22. ವಿದ್ಯುತ್ ಕಂಬಕ್ಕೆ ಒರಗಿ ನಿಲ್ಲಬೇಡಿ.

23. ಗೇ ವಯರ್‍ಗಳನ್ನು ನಿರ್ವಹಿಸಬೇಡಿ.

24. ಮೇಲೆ ಹಾದು ಹೋದ ತಂತಿಗಳ ಕೆಳಗೆ ಅಥವಾ ತಂತಿಗಳ ಸಮೀಪ ಮನೆಗಳನ್ನು ಕಟ್ಟಬೇಡಿ/ಮನೆಗಳ ವಿಸ್ತರಣೆ ಮಾಡಬೇಡಿ.

25. ಬರಿಯ ತಂತಿಗಳ ಬಳಿ ಕಿಟಿಕಿಗಳು ಮತ್ತು ಬಾಲ್ಕನಿಗಳಿರದಂತೆ ನೋಡಿಕೊಳ್ಳಿ.

26. ಮೇಲ್ ತಂತಿಗಳ ಬಳಿ ಇರುವ ಮರದ ಗೆಲ್ಲುಗಳನ್ನು ಚೆಸ್ಕಾಂನ ಅನುಮತಿ ಇಲ್ಲದೆ ಕಡಿಯಬೇಡಿ. ಮೇಲ್ ತಂತಿಯ ಕೆಳಗೆ ಮರಗಳನ್ನು ಬೆಳೆಸಬೇಡಿ.

27. ಬಟ್ಟೆ ಒಣಗಿಸಲು ವಿದ್ಯುತ್ ಕಂಬಗಳಿಗೆÀ ಅಳವಡಿಸಿರುವ ಜಿ.ಐ. ವಯರ್‍ಗಳನ್ನು ಉಪಯೋಗಿಸಬೇಡಿ.

28. ವಿದ್ಯುತ್ ಸಂಪರ್ಕವಿರುವಾಗ ಫ್ಯಾನ್, ಹೀಟರ್, ಇಸ್ತ್ರಿ ಪೆಟ್ಟಿಗೆ ಮೊದಲಾದ ಉಪಕರಣಗಳನ್ನು ಒಂದು ಕಡೆಯಿಂದ ಇನ್ನೊಂದೆಡೆ ಒಯ್ಯಬೇಡಿ. ಆಗ ವಯರ್‍ನ ಮೇಲೆ ಒತ್ತಡ ಬಿದ್ದು ಪ್ಲಗ್ ನಿಂದ ಸಂಪರ್ಕ ತಪ್ಪಬಹುದು ಹಾಗೂ ಇದು ಗಂಭೀರ ಸ್ವರೂಪ ತಾಳಬಹುದು.

29. ಉದ್ದದ ಲೋಹದ ಕೊಳವೆಗಳನ್ನು/ವಸ್ತುಗಳನ್ನು ಮೇಲ್ ತಂತಿಯ ಕೆಳಗೆ ಒಯ್ಯಬೇಡಿ.

30. ಮೇಲ್ ತಂತಿಗಳ ಸಮೀಪ ಗಾಳಿಪಟಗಳ್ನು ಹಾರಿಸಬೇಡಿ.

31. ತುಂಡಾದ ವಿದ್ಯುತ್ ತಂತಿಗಳನ್ನು ಮುಟ್ಟಬೇಡಿ.

32. ಒಡೆದ ಫಿಲಮೆಂಟಿಗೆ ತೇಪೆ ಹಾಕಿ ಬಲ್ಬನ್ನು ಮತ್ತೆ ಉಪಯೋಗಿಸಬೇಡಿ. ಇದು ಬಲ್ಬಿನ ಗಾಜನ್ನು ಬಿಸಿಯಾಗಿಸಿ, ಬಲ್ಬನ್ನು ಸ್ಪೋಟಗೊಳಿಸಲು ಸಾಧ್ಯವಿದೆ.

33. ಅಲ್ಲಲ್ಲಿ ಜೋಡಿಸಿದ ವಯರ್‍ಗಳನ್ನು ಪ್ಲಗ್ ಮೂಲಕ ವಿದ್ಯುತ್ ಉಪಕರಣಗಳಿಗೆ ಸಂಪರ್ಕ ನೀಡಲು ಬಳಸಬೇಡಿ. ಪಕ್ಕಾ ವಯರಿಂಗ್ ಮಾಡಿದ ಪ್ರಕರಣವಾದರೆ ಲೂಪಿಂಗ್ ಪದ್ಧತಿ ಅನುಸರಿಸಲು ಒತ್ತಿ ಹೇಳಿ.

34. ವಯರ್‍ಗಳನ್ನು ಜೋಡಿಸುವಲ್ಲಿ ಬಟ್ಟೆ ಚೂರುಗಳನ್ನು ಉಪಯೋಗಿಸಬೇಡಿ. ಪ್ರತಿರೋಧಕ ಪಟ್ಟಿದಾರವನ್ನು ಉಪಯೋಗಿಸಿ.

35. ವಿದ್ಯುತ್ ಕಂಬಗಳಿಗೆ ಪ್ರಾಣಿಗಳನ್ನು ಕಟ್ಟಿ ಹಾಕಬೇಡಿ.

36. ಒದ್ದೆ ನೆಲದ ಮೇಲೆ ಸಡಿಲವಾಗಿ ತಂತಿಗಳನ್ನು ಎಳೆದುಕೊಂಡು ಹೋಗಬೇಡಿ.

37. ಉಪಕರಣಗಳ ಶರೀರದ ಮೇಲಿರುವ ಸ್ವಿಚ್ಚನ್ನು ಅವಲಂಬಿಸಬೇಡಿ. ಪ್ಲಗ್‍ಗೆ ಪ್ರತ್ಯೇಕ ಸ್ವಿಚ್ ನಿಯಂತ್ರಕವನ್ನು ಒದಗಿಸಿ.

38. ಥರ್ಮೊಸ್ಟಾಟ್ ಇಲ್ಲದ ಇಸ್ತ್ರಿ ಪೆಟ್ಟಿಗೆಯನ್ನು ಸಾಕಷ್ಟು ಬಿಸಿಯಾದ ಬಳಿಕವೂ ಸ್ವಿಚ್ ಆನ್ ಇಟ್ಟು ತೆರಳಬೇಡಿ.

39. ವಿದ್ಯುತ್ ಹೀಟರ್‍ನಲ್ಲಿ ಹಪ್ಪಳವನ್ನು ಸುಡಬೇಡಿ. ಇದರಿಂದ ಹೀಟರಿನ ವಿದ್ಯುತ್ ತಂತಿಗೆ ಬೆರಳುಗಳು ಸ್ಪರ್ಶಿಸಿ ಅಪಾಯ ಸಂಭವಿಸಬಹುದು.

40. ಹೀಟರ್‍ನಿಂದ ಪಾತ್ರೆ ತೆಗೆಯುವ ಮುನ್ನ ಸ್ವಿಚ್ಚನ್ನು ಆರಿಸಲು ಮರೆಯಬೇಡಿ. ಹೀಟರ್ ಮೇಲೆ ಪಾತ್ರೆ ಇಟ್ಟ ಬಳಿಕವೇ ಮತ್ತೆ ಸ್ವಿಚ್ ಆನ್ ಮಾಡಿ.

41. ಭತ್ತ, ಬಟ್ಟೆ ಚೀಲಗಳು, ಒಣಹುಲ್ಲು, ಇತ್ಯಾದಿಗಳನ್ನು ನಿಮ್ಮ ಸ್ಥಾವರದ ವಯರನ್ನು ಸ್ಪರ್ಶಿಸುವಷ್ಟು ಎತ್ತರಕ್ಕೆ ಪೇರಿಸಿಡಬೇಡಿ.

42. ರೇಡಿಯೋ ಮತ್ತು ದೂರದರ್ಶನ ಸೆಟ್‍ಗಳು ಚಾಲೂ ಇದ್ದಾಗ ದಯವಿಟ್ಟು ಮಧ್ಯೆ ಕೈ ಹಾಕಬೇಡಿ. ಶುಚಿಗೊಳಿಸಬೇಕಾದಲ್ಲಿ ಉಪಕರಣದ ವಿದ್ಯುತ್ ಸಂಪರ್ಕವನ್ನು ತೆಗೆಯಿರಿ.

43. ಬಲ್ಬಿಗೆ ಅತೀ ಸಮೀಪ ನಿಲ್ಲಬೇಡಿ ಮತ್ತು 3ನೇ ವ್ಯಕ್ತಿಗೆ ಸ್ಚಿಚ್ ಆನ್ ಮಾಡಲು ತಿಳಿಸಿ.

44. ಮಕ್ಕಳಿಗೆ ಉಪಕರಣಗಳ ನಿಯಂತ್ರಣಗಳನ್ನು ನಿರ್ವಹಿಸಲು/ಕೈ ಹಾಕಲು ಬಿಡಬೇಡಿ.

 

 

ವಾಣಿಜ್ಯ ಬಳಕೆ ಗ್ರಾಹಕರು

 

ಮಾಡಿ

1. ಎಲ್ಲಾ ವಯರಿಂಗ್ ಕೆಲಸವನ್ನು ಪರವಾನಗಿ ಪಡೆದ ವಯರಿಂಗ್ ಗುತ್ತಿಗೆದಾರರಿಂದಲೇ ಮಾಡಿಸಿ.

2. ವಿದ್ಯುತ್ ಕಂಬಗಳಿಗೆ ಜಾಹೀರಾತು ಫಲಕಗಳು, ಧ್ವಜಗಳು, ಇತ್ಯಾದಿಗಳನ್ನು ಕಟ್ಟಬೇಡಿ.

 

ಮಾಡದಿರಿ

1.ಅನುಮತಿ ಇರುವುದಕ್ಕಿಂತ ಹೆಚ್ಚು ಎತ್ತರದವರೆಗೆ ಸಾಮಾನುಗಳನ್ನು ತುಂಬಿದ ವಾಹನಗಳ ಮೇಲೆ

ಪ್ರಯಾಣಿಸಬೇಡಿ.ಏಕೆಂದರೆ ಇದು ವಿದ್ಯುತ್ ಮೇಲು ತಂತಿಗಳಿಗೆ ತಾಗಿ ಪ್ರಾಣಾಂತಿಕ

ಅಪಘಾತವಾಗಬಹುದು.

2. ಕೊಳವೆಗಳ ತಿರುವು ಇರುವಲ್ಲಿ ಕೇವಲ ಶೇಕಡಾ 50ರಷ್ಟು ಮಾತ್ರ ಉಪಯೋಗಿಸಿ.

ವಯರ್/ಕೇಬಲ್ ಗಳನ್ನು ಎಳೆಯಿರಿ.

3. ಒಂದಕ್ಕೊಂದು ಸಮೀಪವಾಗಿ ಇರುವಂತೆ ನೀರಿನ ಕೊಳವೆ ಮತ್ತು ವಿದ್ಯುತ್ ಕೊಳವೆಗಳನ್ನು

ಅಳವಡಿಸಬೇಡಿ

 

ಕೈಗಾರಿಕಾ ಬಳಕೆ ಗ್ರಾಹಕರು

 

ಮಾಡಿ

1. ಕೆಲಸ ಪ್ರಾರಂಭಿಸುವ ಮೊದಲು ಎಲ್ಲಾ ಸ್ವಿಚ್‍ಗಳ ಮೇಲೆ ಕೆಲಸಗಾರರು ಕೆಲಸ ಮಾಡುತ್ತಿದ್ದಾರೆಂಬ ಗುರುತು ಬೋರ್ಡನ್ನು ಇಡಿ.

2. ಯಾವುದೇ ಸಕ್ರ್ಯೂಟ್ ಅಥವಾ ಉಪಕರಣಗಳ್ಲಿ ಕೆಲಸ ಮಾಡುವ ಮೊದಲು ಎಲ್ಲಾ ನಿಯಂತ್ರಕ ಸ್ವಿಚ್ ಗಳನ್ನು ತೆರೆದಿಡಲಾಗಿದೆಯೇ ಮತ್ತು ಬೀಗ ಹಾಕಿದೆಯೇ ಅಥವಾ ಫ್ಯೂಸನ್ನು ತೆಗೆಯಲಾಗಿದೆÀಯೇ ಎಂದು ಖಚಿತಪಡಿಸಿಕೊಳ್ಳಿ.

3. ಸಕ್ರ್ಯೂಟ್‍ಗಳು ನಿರುಪಯುಕ್ತ ಆಗಿವೆ ಎಂದು ರುಜುವಾತಾಗುವ ತನಕ ಚಟುವಟಿಕೆಯಿಲ್ಲಿದೆ ಎಂದು ತಿಳಿಯಿರಿ.

4. ಯಾವಾಗ ಕಿಡಿಗಳುಂಟಾಗಿ ಯಾ ಸಿಡಿಯುವ ಲಕ್ಷಣಗಳು ಕಾಣಬರುತ್ತದೆಯೇ ಆಗ ನಿಮ್ಮ ಮುಖವನ್ನು ಆಚೆ ತಿರುಗಿಸಿ.

5. ಎಲ್ಲಾ ತಂತಿ ಜೋಡಣೆಗಳು ಮತ್ತು ಸಂಪರ್ಕಗಳು ಭದ್ರವಾಗಿ ಮಾಡಲ್ಪಟ್ಟಿವೆಯೇ ಎಂದು ನೋಡಿಕೊಳ್ಳಿ.

6. ಪ್ರಧಾನ ಕೆಲಸ ಮಾಡುವ ಮೊದಲು ಎಲ್ಲಾ ಕೇಬಲ್‍ಗಳನ್ನು ಪೂರ್ಣವಾಗಿ ಭೂಸಂಪರ್ಕಕ್ಕೆ ಒಳಪಡಿಸಿ.

7. ರಬ್ಬರ್ ಕೈಚೀಲಗಳನ್ನು ನಿಯತಕಾಲಿಕವಾಗಿ ಪರೀಕ್ಷಿಸಿ.

8. ರಬ್ಬರ್ ಚಾಪೆಯನ್ನು ವಿದ್ಯುತ್ ಸ್ವಿಚ್ ಬೋರ್ಡ್‍ಗಳ ಎದುರಿಗೆ ಇಡಿ.

9. ಎಲ್ಲಾ ಉದ್ಯೋಗಿಗಳು ಸ್ಥಳ ಮತ್ತು ಅಗ್ನಿಶಾಮಕ ಉಪಕರಣಗಳ ಬಳಕೆ ಮಾಡುವುದನ್ನು ತಿಳಿದಿರುವರೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

10. ಬೆಂಕಿ ನೀರುನಳಿಕೆಯನ್ನು ಉಪಯೋಗಿಸುವಾಗ ಜೆಟ್ ನೀರು ಜೀವಂತ ವಿದ್ಯುತ್ ಉಪಕರಣದ ಸಂಪರ್ಕವಿರುವಲ್ಲಿಗೆ ಸರಿಯಾಗಿ ಸಂಪರ್ಕಿಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.

11. ಪ್ರತ್ಯೇಕತೆಯ ಬಿಂದುವಿನಲ್ಲಿ ನಿರ್ಬಂಧ ಫಲಕ ವನ್ನು ಹಾಕಿ ಮತ್ತು ಕೆಲಸ ನಿರ್ವಹಿಸುವಾಗ ಫ್ಯೂಸ್‍ನ ಕ್ಯಾರಿಯರ್‍ನ್ನು ಕಳಚ.

 

 

ಮಾಡದಿರಿ

1. ನಿಯಂತ್ರಿಸುವ ಸರ್ಕಿಟಿನ ಬಗ್ಗೆ ಸಾಕಷ್ಟು ತಿಳುವಳಿಕೆ ಇಲ್ಲದೆ ಮತ್ತು ಅದನ್ನು ತೆರೆದಿಟ್ಟ ಬಗ್ಗೆ ಕಾರಣವನ್ನು ತಿಳಿಯದೆ ನೀವು ಸ್ಟಿಚ್‍ಗಳನ್ನು ಮುಚ್ಚಬೇಡಿ.

2. ಯಾವುದೇ ವಿದ್ಯುತ್ ಗೇರ್ ಅಥವಾ ವಾಹಕಗಳನ್ನು ಅದು ನಿರುಪಯುಕ್ತವಾಗಿದೆ ಮತ್ತು ಭೂಸಂಪರ್ಕ ಹೊಂದಿದೆ ಎಂಬುದನ್ನು ಖಚಿತಪಡಿಸದೆ ಸ್ಪರ್ಶಿಸಬೇಡಿ ಅಥವಾ ಹಸ್ತಕ್ಷೇಪ ಮಾಡಬೇಡಿ. ಅಧಿಕ ವೋಲ್ಟೇಜಿನ ಉಪಕರಣಗಳು ಶಾಕ್ ನೀಡಬಹುದು ಅಥವಾ ಸ್ಪರ್ಶಿಸದಿದ್ದರೂ ಸಿಡಿಯಬಹುದು.

3. ಬರಿಯ ಬೆರೆಳುಗಳಿಂದ ಯಾ ಕೈಯಿಂದ ಸಕ್ರ್ಯೂಟನ್ನು ಅಥವಾ ಇತರ ಪಾಳಿ ಸಲಕರಣೆಗಳನ್ನು ಅದು ಉಪಯುಕ್ತವೇ ನಿರುಪಯುಕ್ತವೇ ಎಂದು ಪರೀಕ್ಷಿಬೇಡಿ.

4. ನಿಧಾನವಾಗಿ ಅಥವಾ ಅನುಮಾನದಿಂದ ಸ್ವಿಚ್‍ನ್ನು ಅಥವಾ ಫ್ಯೂಸನ್ನು ತೆಗೆಯಬೇಡಿ ಯಾ ಮುಚ್ಚಬೇಡಿ. ತುರ್ತಾಗಿ ನಿರ್ಧಿಷ್ಟವಾಗಿ ಮತ್ತು ಅಚಲವಾಗಿ ಅದನ್ನು ಮಾಡಿ.

5. ಕ್ಷೀಣ ನಿರೋಧಕವಿರುವ ಮತ್ತು ಕಳಪೆ ವಯರನ್ನು ಉಪಯೋಗಿಸಬೇಡಿ.

6. ಅವಸರ ಮಾಡಬೇಡಿ ಮತ್ತು ಅಜಾಗ್ರತೆಯಿಂದಿರಬೇಡಿ. ಇದು ಅನೇಕ ಅಪಘಾತಗಳಿಗೆ ಕಾರಣವಾಗಬಹುದು.

7. ಅಗ್ನಿ ಆಕಸ್ಮಿಕದಲ್ಲಿ ಜೀವಂತ ವಿದ್ಯುತ್ ಉಪಕರಣದ ಮೇಲೆ ನೀರನ್ನು ಎಸೆಯಬೇಡಿ.

8. ಅಗ್ನಿಶಾಮಕ ಉಪಕರಣಗಳು ಆ ಉದ್ದೇಶಕ್ಕೆ ಸೂಕ್ತವಾಗಿದೆ ಎಂದು ಸ್ಪಷ್ಟವಾಗಿ ಗುರುತಿಸಲ್ಪಟ್ಟಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳದೆ ವಿದ್ಯುತ್ ಉಪಕರಣಗಳ ಮೇಲೆ ಬಳಸಬೇಡಿ.

9. ಸುರಕ್ಷಾ ಬೆಲ್ಟ್ ಮತ್ತು ರಬ್ಬರ್ ಕೈಚೀಲಗಳು ಇಲ್ಲದೆ ಮತ್ತು ನೇರ ಕಾರ್ಯಾಚರಣೆಯ ಬಳಿ ಸೂಕ್ತ ವ್ಯಕ್ತಿ ಹತ್ತಿರದಲ್ಲಿ ನೆಲದಲ್ಲಿ ನಿಂತು ಎಚ್ಚರಿಕೆ ಕೊಡದಿರುವಂತಿದ್ದರೆ, ವಿದ್ಯುತ್ ಹರಿಯುತ್ತಿರುವಾಗ ಕಂಬದ ಮೇಲೆ ಅಥವಾ ಎತ್ತರಿಸಿದ ಸ್ಥಾನದಲ್ಲಿ ಕೆಲಸ ನಿರ್ವಹಿಸಬೇಡಿ.

10. ಲ್ಯಾಶಿಂಗ್ ಹಗ್ಗವಿಲ್ಲದ ಏಣಿಯನ್ನು ಬಳಸಬೇಡಿ. ಪರ್ಯಾವಾಗಿ ಇನ್ನೊಬ್ಬ ವ್ಯಕ್ತಿ ಏಣಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿರಬೇಕು.

11. ಬೇಲಿಯಲ್ಲಿ ವಿದ್ಯುತ್ ಹರಿಸಬೇಡಿ. 2003ರ ಭಾರತೀಯ ವಿದ್ಯುತ್ ಕಾಯಿದೆಯನ್ವಯ ಬೇಲಿಗೆ ವಿದ್ಯುತ್ ಹರಿಸುವುದು ಒಂದು ಅಪರಾಧವಾಗಿದೆ.

 

ಇತ್ತೀಚಿನ ನವೀಕರಣ​ : 28-07-2022 05:34 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080