ಪ್ರೋತ್ಸಾಹಕ ಯೋಜನೆಗಳು

ಪ್ರಾಮಾಣಿಕ ಪಾವತಿಗಾಗಿ/ಮುಂಗಡ ಪಾವತಿಗಾಗಿ ಪ್ರೋತ್ಸಾಹ :

 

ಈ ಕೆಳಕಂಡ ಬಳಕೆದಾರರಿಗೆ ಬಿಲ್ಲಿನ ಮೊಬಲಗಿನ ಮೇಲೆ ಶೇ 0.25 ರಷ್ಟು ರಿಯಾಯಿತಿಯನ್ನು ಪ್ರೋತ್ಸಾಹವೆಂದು ಮುಂದಿನ ತಿಂಗಳ ಬಿಲ್ಲಿನಲ್ಲಿ ಹೊಂದಾಣಿಕೆ ಮಾಡತಕ್ಕದ್ದು.

 

(i)  ಇ.ಸಿ.ಎಸ್ ಮೂಲಕ ಪಾವತಿಸುವ ಎಲ್ಲ ಪ್ರಕರಣಗಳಲ್ಲಿ,

(ii) ಮಾಸಿಕ, 100000/-(ಒಂದು ಲಕ್ಷ) ರೂ.ಗಳಿಗೂ ಹೆಚ್ಚಿನ ಮೊಬಲಗಿರುವ ಬಿಲ್ಲುಗಳನ್ನು ಗಡವು ದಿನಾಂಕದ 10 ದಿನಗಳ ಒಳಗಾಗಿ ಪಾವತಿಸಿದರೆ,

(iii) ತಿಂಗಳಿನ ಬಿಲ್ಲಿನ ಬಾಬ್ತು ಮುಂಗಡವಾಗಿ ರೂ. 1000 ಕ್ಕಿಂತ ಮೇಲ್ಪಟ್ಟು ಹಣ ಪಾವತಿಸಿದ್ದಲ್ಲಿ.

 

ಸೋಲಾರ್ ರಿಯಾಯಿತಿ

 

ಸೌರ ಶಕ್ತಿ ಚಾಲಿತ ವಾಟರ್ ಹೀಟರನ್ನು ಸ್ಥಾಪಿಸಿ, ಬಳಸುವ ಎಲ್.ಟಿ-2(ಎ) ಸ್ಥಾಪನಗಳಿಗೆ ಬಳಸಿದ ಪ್ರತಿ ಯೂನಿಟ್ಟಿಗೆ 50 ಪೈಸೆಯೆಂತೆ ತಿಂಗಳಿಗೆ ಪ್ರತಿ ಸ್ಥಾಪನಕ್ಕೆ ಗರಿಷ್ಠ ಮಿತಿ  ರೂ 50/- ರಂತೆ ರಿಯಾಯಿತಿಯನ್ನು ನೀಡಲಾಗುವುದು. ವಸತಿ ಸಂಕೀರ್ಣಗಳು/ಗುಂಪು ಮನೆಗಳು ಇರುವೆಡೆ ಪ್ರತಿ ಮನೆಗೆ ಕನಿಷ್ಟ 100 ಲೀಟರ್ ಸಾಮರ್ಥ್ಯದ ಲೆಕ್ಕದಂತೆ ಸಮಗ್ರವಾಗಿ ಒಂದೇ ಸೌರಶಕ್ತಿ ಚಾಲಿತ ವಾಟರ್ ಹೀಟರ್ ನ್ನು ಸ್ಥಾಪಿಸಿ ಬಳಸಿದರೆ, ಪ್ರತಿಯೊಂದು ಮನೆಗೂ ಸೌರಶಕ್ತಿ ಚಾಲಿತ ವಾಟರ್ ಹೀಟರ್ ರಿಯಾಯಿತಿಯನ್ನು ನೀಡಲಾಗುವುದು.

 

ವಿಕಲಚೇತನರಿಗಾಗಿ ರಿಯಾಯಿತಿ

 

ಅಂಗವಿಕಲರು, ವೃದ್ದರು, ನಿರಾಶ್ರಿತರು ಮತ್ತು ಅನಾಥರುಗಳಿಗೆ ಧರ್ಮದತ್ತಿ ಸಂಸ್ಥೆಗಳು ನಡೆಸುವ ಗೃಹಗಳು ಶಾಲೆಗಳು, ಹಾಸ್ಟೆಲ್ ಗಳು ಮತ್ತು ಪುನರ್ವಸತಿ ಕೇಂದ್ರಗಳಿಗೆ ಪ್ರತಿ ಯೂನಿಟ್ಟಿಗೆ 25 ಪೈಸೆ ರಿಯಾಯಿತಿ ಕೊಡಲಾಗುವುದು.

ಅಂಗವಿಕಲರು ನಡೆಸುವ ಎಸ್.ಟಿ.ಡಿ/ಐ.ಎಸ್.ಡಿ/ಫ್ಯಾಕ್ಸ್ ಸೌಲಭ್ಯವಿರುವ ಸಾರ್ವಜನಿಕ ದೂರವಾಣಿ ಬೂತ್ ಗಳಿಗೆ ಸಂಬಂಧಿಸಿದಂತೆ ಮಾಸಿಕ ಬಿಲ್ ನಲ್ಲಿ ನಿಗದಿತ ಶುಲ್ಕ ಮತ್ತು ವಿದ್ಯುತ್ ಬಳಕೆ ಶುಲ್ಕದ ಮೇಲೆ ಶೇಕಡಾ 20 ರಷ್ಟು ರಿಯಾಯಿತಿಯನ್ನು ನೀಡಲಾಗುವುದು.

 

ಕೆಪಾಸಿಟರ್ ಅಳವಡಿಸಿರುವ ಕೃಷಿ ಪಂಪ್ ಸೆಟ್ ಗಳಿಗೆ ರಿಯಾಯಿತಿ

 

ಎಲ್ಲಾ ಮಾಪಕ ಅಳವಡಿಸಿರುವ ನೀರಾವರಿ ಪಂಪ್ ಸೆಟ್ ಸ್ಥಾಪನಗಳಲ್ಲಿ ಕಂಡಿಶನ್ಸ್ ಆಫ್ ಸಪ್ಲೈ ಆಫ್ ಎಲೆಕ್ಟ್ರಿಸಿಟಿ ಆಫ್ ಡಿಸ್ಟ್ರಿಬೂಷನ್ ಲೈಸೆನ್ಸೀಸ್ ಇನ್ ದಿ ಸ್ಟೇಟ್ ಆಫ್ ಕರ್ನಾಟಕ’ರ ನಿಯಮಗಳ ನಿಬಂಧನೆ 23 ರ ಪ್ರಕಾರ ಕೆಪಾಸಿಟರುಗಳನ್ನು ಅಳವಡಿಸಿದ್ದರೆ, ಅಂತಹ ಸ್ಥಾಪನಗಳಿಗೆ ಯೂನಿಟ್ ಒಂದಕ್ಕೆ ಎರಡು ಪೈಸೆ ರಿಯಾಯಿತಿಯನ್ನು ನೀಡಲಾಗುವುದು.

ಇತ್ತೀಚಿನ ನವೀಕರಣ​ : 30-07-2020 02:16 PM ಅನುಮೋದಕರು: Admin