ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಮೈಸೂರು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ನಗರ. ಉದ್ಯಾನಗಳ ನಗರಿ, ಅರಮನೆಗಳ ನಗರಿ, ಐತಿಹಾಸಿಕ ಮತ್ತು ಸಾಂಸ್ಕøತಿಕ ನಗರಿ ಮುಂತಾಗಿ ಹೆಸರಿಸಲ್ಪಟ್ಟ ಮೈಸೂರು ಕರ್ನಾಟಕದ ಹೆಮ್ಮೆಯ ನಗರಗಳಲ್ಲಿ ಪ್ರಮುಖವಾದದ್ದು. ಸ್ವಾತಂತ್ರ್ಯಪೂರ್ವದಲ್ಲಿ ನಮ್ಮ ರಾಜ್ಯವನ್ನು ಮೈಸೂರು ರಾಜ್ಯವೆಂದೇ ಕರೆದಿದ್ದು ಇದಕ್ಕೆ ಸಾಕ್ಷಿ. ಮಾನವನ ಜೀವನ ವಿಧಾನವನ್ನೇ ಬದಲಿಸಿದ ವಿದ್ಯುಚ್ಛಕ್ತಿಯ ಉತ್ಪಾದನೆ ಜಗತ್ತಿನ ಮುಂದುವರೆದ ದೇಶಗಳಲ್ಲಿ ಕೂಡ ಶೈಶವಾವಸ್ಥೆಯಲ್ಲಿದ್ದ ಸಮಯದಲ್ಲಿ, ಅಂದಿನ ಮೈಸೂರು ರಾಜ್ಯವು 1902ರಲ್ಲಿಯೇ ಏಷ್ಯಾದ ಮೊಟ್ಟಮೊದಲ ಪ್ರಮುಖ ಜಲವಿದ್ಯುತ್ ಘಟಕವನ್ನು ಶಿವನಸಮುದ್ರದಲ್ಲಿ ಸ್ಥಾಪಿಸಿ, ವಾಣಿಜ್ಯಾತ್ಮಕ ಕಾರ್ಯಾಚರಣೆಗೆ ತೊಡಗಿದ್ದು ಈಗ ಇತಿಹಾಸ. ಇದರೊಂದಿಗೆ, ಕೋಲಾರದ ಚಿನ್ನದ ಗಣಿಗಳಿಗಾಗಿ ವಿಶ್ವದ ಅತಿ ಹೆಚ್ಚು ವೋಲ್ಟೇಜ್‍ನ ಅತ್ಯಂತ ಉದ್ದದ ಪ್ರಸರಣ ಮಾರ್ಗದ ನಿರ್ಮಾಣ, ಮೈಸೂರು ಅರಮನೆಗೆ ವಿದ್ಯುತ್ ದೀಪಾಲಂಕಾರ ಹೀಗೆ ಹಲವು ಪ್ರಥಮಗಳನ್ನು ಕೈಗೊಂಡ ಹೆಮ್ಮೆ ನಮ್ಮ ರಾಜ್ಯದ್ದಾಗಿದೆ. 1908ರಿಂದ ಇಂದಿನವರೆಗೂ ಮೈಸೂರು ಅರಮನೆಯ ಭವ್ಯ ದೀಪಾಲಂಕಾರವು ಲಕ್ಷಾಂತರ ಪ್ರೇಕ್ಷಕರ ಪ್ರಮುಖ ಆಕರ್ಷಣೆಯಾಗಿಯೇ ಮುಂದುವರೆದಿದೆ. 1909ರಲ್ಲಿ 600 ಬೀದಿ ದೀಪಗಳು ಹಾಗೂ 617 ಗ್ರಾಹಕರಿಗೆ ವಿದ್ಯುತ್ ಪೂರೈಕೆ ಪ್ರಾರಂಭಿಸಿದ ನಂತರ ಶಿವನಸಮುದ್ರದ ವಿದ್ಯುತ್ ಉತ್ಪಾದನೆಯನ್ನು ಹಂತಹಂತವಾಗಿ 42 ಮೆಗಾವ್ಯಾಟ್ ಸಾಮಥ್ರ್ಯಕ್ಕೆ ಹೆಚ್ಚಿಸಲಾಯಿತು. ಜೊತೆಗೆ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯ ಪೂರೈಕೆಗಾಗಿ 1940ರಲ್ಲಿ ಸಮೀಪದ ಶಿಂಷಾ ಎಂಬಲ್ಲಿ 17.2 ಮೆ.ವ್ಯಾ. ಸಾಮಥ್ರ್ಯದ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಯಿತು. ಕ್ರಮೇಣ ಕೈಗಾರಿಕೆ, ಗ್ರಾಮೀಣ ವಿದ್ಯುದೀಕರಣ ಇತ್ಯಾದಿ ನಿರಂತರವಾಗಿ ಹೆಚ್ಚತೊಡಗಿದ ಅವಿರತ ವಿದ್ಯುತ್ ಬೇಡಿಕೆಯ ಪೂರೈಕೆಗಾಗಿ, ಈಗಾಗಲೇ ಇರುವ ಉತ್ಪಾದನಾ ಕೇಂದ್ರಗಳ ಸಾಮಥ್ರ್ಯವನ್ನು ಹೆಚ್ಚಿಸುವ ಜೊತೆಗೆ ಮಹಾತ್ಮ ಗಾಂಧಿ ಜಲ ವಿದ್ಯುತ ಘಟಕ, ನಾಗಝರಿ, ಸೂಪಾ ವಿದ್ಯುತ ಘಟಕಗಳು, ರಾಯಚೂರು ಉಷ್ಣ ವಿದ್ಯುತ್ ಘಟಕ ಮುಂತಾಗಿ ಅನೇಕ ಹೊಸ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವುದು ಅಗತ್ಯವಾಯಿತು.

 

1957ರಲ್ಲಿ ಮೈಸೂರು ರಾಜ್ಯದ ವಿದ್ಯುತ್ ಪ್ರಸರಣ ಮತ್ತು ವಿತರಣಾ ವ್ಯವಸ್ಥೆಗಾಗಿ ಎಂ.ಎಸ್.ಇ.ಬಿ.ಯನ್ನು ರಚಿಸಲಾಯಿತು ಮತ್ತು ಇತರೆ ಖಾಸಗೀ ವಿತರಣಾ ಕಂಪನಿಗಳನ್ನು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯೊಂದಿಗೆ ವಿಲೀನಗೊಳಿಸಲಾಯಿತು.

 

ವಿದ್ಯುತ್ ಕ್ಷೇತ್ರಗಳ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುವ ಜೊತೆಗೆ ಭಾರತ ಸರ್ಕಾರದ ಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ, ಕರ್ನಾಟಕ ವಿದ್ಯುತ್ ಸುಧಾರಣಾ ಕಾಯ್ದೆಯ ರಚನೆಗೆ ಶಾಸನ ಸಭೆಯಲ್ಲಿ ಅಂಗೀಕಾರ ದೊರೆತು, ಕ.ವಿ.ನಿ. ಆಯೋಗದ ರಚನೆಯಾಯಿತು. ಈ ಕಾಯ್ದೆಯ ಪ್ರಕಾರ ಕ. ವಿ. ಮಂಡಳಿಯು 1.08.1999ರಿಂದ ನಿಗಮವಾಗಿ ಪರಿವರ್ತನೆಗೊಂಡು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ನಿಯಮಿತ)ದ ಉಗಮವಾಯಿತು. ಮುಂದುವರೆದು, ಭೌಗೋಳಿಕ ಪ್ರದೇಶಗಳನ್ನಾಧರಿಸಿ, ವಿತರಣಾ ವ್ಯವಸ್ಥೆಯನ್ನು ವಿಭಜಿಸಿ, ದಿ. 1.6.2002ರಿಂದ ಈ ಕೆಳಗಿನಂತೆ 4 ಹೊಸ ವಿತರಣಾ ಕಂಪನಿಗಳನ್ನು ರೂಪಿಸಲಾಯಿತು.

 

  • ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ)
  • ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ)
  • ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ)
  • ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಗೆಸ್ಕಾಂ)

 

2005ನೇ ಇಸವಿಯಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಬೇರ್ಪಟ್ಟು ಅಸ್ತಿತ್ವಕ್ಕೆ ಬಂದಿದ್ದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ. ಕರ್ನಾಟಕ ಸರ್ಕಾರದ ಆದೇಶ ಇಎನ್ 08 ಪಿಎನ್‍ಆರ್ 2005/262ರ ಪ್ರಕಾರ 1-4-2005ರಿಂದ ಕಾರ್ಯಾಡಳಿತ ನಡೆಸುತ್ತಿರುವ ನಿಗಮವು ಕಂಪನಿ ಕಾಯ್ದೆ 1956ರ ಅಡಿಯಲ್ಲಿ ಸ್ಥಾಪಿಸಲ್ಪಟ್ಟಿದ್ದು, ಮೈಸೂರಿನಲ್ಲಿ ಆಡಳಿತ ಕಚೇರಿಯನ್ನು ಹೊಂದಿದೆ. ಪ್ರಸ್ತುತ ಜಗತ್ಪ್ರಸಿದ್ಧ ಇನ್ಫೋಸಿಸ್ ಟೆಕ್ನಾಲಜೀಸ್, ಟಿವಿಎಸ್ ಮೋಟಾರ್ಸ್, ನೆಸ್ಟ್ಲೆ ಇಚಿಡಿಯಾ, ರೀಡ್ ಅಂಡ್ ಟೈಲರ್ಸ್, ವಿಕ್ರಾಂತ್ ಟೈರ್ಸ್ ಮುಂತಾದ ಪ್ರಮುಖ ಉದ್ಯಮಗಳಿಗೆ ವಿದ್ಯುತ್ ಸರಬರಾಜು ಮಾಡುತ್ತಿರುವ ನಿಗಮವು ಈ ಕೆಳಗಿನ ಐದು ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಯ ಜವಾಬ್ದಾರಿಯನ್ನು ಹೊಂದಿದೆ.

  • ಮೈಸೂರು
  • ಚಾಮರಾಜ ನಗರ
  • ಮಂಡ್ಯ
  • ಹಾಸನ
  • ಕೊಡಗು

 

ಗುಣಾತ್ಮಕ, ತಡೆರಹಿತ ಮತ್ತು ಸೂಕ್ತ ಬೆಲೆಯ ವಿದ್ಯುತ್ ಪೂರೈಕೆ ನಿಗಮದ ಧ್ಯೇಯವಾಗಿದ್ದು ಕೇಂದ್ರ, ರಾಜ್ಯ ಮತ್ತು ಇನ್ನಿತರ ಸಂಘಸಂಸ್ಥೆಗಳು ಅದರಲ್ಲೂ ಮುಖ್ಯವಾಗಿ ಗ್ರಾಹಕರ ಸಹಯೋಗದೊಂದಿಗೆ ಈ ಗುರಿಯನ್ನು ತಲುಪಲು ನಿಗಮವು ಕಂಕಣಬದ್ಧವಾಗಿದೆ.

ಇತ್ತೀಚಿನ ನವೀಕರಣ​ : 17-07-2020 03:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080